Index   ವಚನ - 158    Search  
 
ಜಂಗಮಲಿಂಗ ಜಂಗಮಲಿಂಗ ಎಂಬ ಭಂಗಿತರೆ ಕೇಳಿ: ಜಂಗಮವೆ ತಾನಾದರೆ ಅಂಗಸುಖವ ಬಯಸಲ್ಯಾತಕ್ಕೊ? ಜಂಗಮವೆ ತಾನಾದರೆ ಸ್ಥಾವರವ ಹಿಡಿದು ಕಾಯಕವ ಮಾಡಲ್ಯಾತಕ್ಕೊ? ಜಂಗಮವೆ ತಾನಾದರೆ ಆ ಗ್ರಾಮದ ಹಿರಿಯರ ಮಣಿಹವ ಮಾಡಲ್ಯಾತಕ್ಕೊ? ಇಂತೀ ಓಡಲಾಸೆಗಾಗಿ ಲಾಂಛನವ ತೊಟ್ಟು, ದೀಕ್ಷೋಪದೇಶವ ಕೊಟ್ಟು, ಗುರುವೆಂದರಿಯದೆ, ಬಾಗದೆ, ಜಂಗಮವೆಂಬಾನೆಯಲಿ ತಿರುಗುತಿಹ ವೇಷಧಾರಿಗಳ ಮೆಚ್ಚುವನೆ? ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.