Index   ವಚನ - 159    Search  
 
ಜಂಗಮಲಿಂಗ ಜಂಗಮಲಿಂಗ ಎಂಬ ಅಣ್ಣಗಳಿರಾ ಕೇಳಿರಿ; ಜಂಗಮವೆ ತಾನಾದರೆ ಆ ಜಂಗಮಕ್ಕೆ ತೀರ್ಥ ಯಾರದು ಎರೆಯಬೇಕು? ಪ್ರಸಾದ ಯಾರದು ತೋರಬೇಕು? ಜಂಗಮಲಿಂಗ ಜಂಗಮಲಿಂಗ ಎಂಬ ಶಬ್ದಸೂತಕಿಗಳ ಮಾತು ಕೇಳಬಾರದು ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.