Index   ವಚನ - 166    Search  
 
ಸಂಸಾರಿ ನಿಸ್ಸಂಸಾರಿ ಎಂದೆಂಬರು ನೋಡಾ, ಸಂಸಾರಿ ನಿಸ್ಸಂಸಾರಿಯಾದ ಪರಿ ಎಂತೆಂದರೆ, ಭಕ್ತನು ಹೊನ್ನು ಹೆಣ್ಣು ಮಣ್ಣು ಹಿಡಿದಲ್ಲಿ ಸಂಸಾರಿ; ಹೊನ್ನು ಹೆಣ್ಣು ಮಣ್ಣು ಗುರುಲಿಂಗಜಂಗಮದ ಸ್ವಯಂ ಎಂದರಿತು ಕೊಟ್ಟು ಕೊಂಡರೆ ಆತ ನಿಸ್ಸಂಸಾರಿ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.