ಸಹಜ ಸಹಜವೆಂತೆಂಬ ನಿರ್ಣಯವ ಕೇಳಿರಯ್ಯ;
ಬೆಲ್ಲವಂತ ಮರಗಳ ಮಲ್ಲಿಗೆ ದವನ ಸೇವಂತಿಗೆ
ಸಂಪಿಗೆ ಹಲಸು ನಾರಂಗ ಮಾವು ನೇರಲ ಲಿಂಬೆ ಹುಣಸೆ
ಕಬ್ಬು ಬಾಳೆ ಬೇವು ಇಂತಿವುಗಳ ಸಸಿಯಂ ತಂದು,
ತಾಯಿಯೆಂಬ ಭೂಮಿಯ ಮೇಲಿಟ್ಟು ಕಟ್ಟೆಯಂ ಕಟ್ಟಿ,
ತಂದೆಯಂಬ ಉದಕವನರೆರೆಯಲು,
ಆ ಸಸಿಯ ತಮ್ಮ ಸಹಜ ಗುಣಕ್ಕೆ ಹೋಲಲಿಲ್ಲವೆ?
ತಂದೆಯಂತೆ ಉದಕವು ಬೀಜವು ಹೋತಿತ್ತು.
ಇದನ್ನರಿಯದೆ ಸಹಜ ಬೀಜವೆಂತೆಂದು ಆಡುವ ಮರುಳರ
ಮಾತ ಕೇಳವಾರದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Sahaja sahajaventemba nirṇayava kēḷirayya;
bellavanta maragaḷa mallige davana sēvantige
sampige halasu nāraṅga māvu nērala limbe huṇase
kabbu bāḷe bēvu intivugaḷa sasiyaṁ tandu,
tāyiyemba bhūmiya mēliṭṭu kaṭṭeyaṁ kaṭṭi,
tandeyamba udakavanarereyalu,
ā sasiya tam'ma sahaja guṇakke hōlalillave?
Tandeyante udakavu bījavu hōtittu.
Idannariyade sahaja bījaventendu āḍuva maruḷara
māta kēḷavāradu kāṇā
ele nam'ma kūḍala cennasaṅgamadēvayya.