ಬ್ರಹ್ಮಗೆ ಗಂಧ, ವಿಷ್ಣುವಿಗೆ ನಾಮ, ರುದ್ರಗೆ ವಿಭೂತಿ
ಬ್ರಹನೆಂಬ ಶಿರಕ್ಕೆ ಗಂಧ,
ವಿಷ್ಣುವೆಂಬ ಉರಕ್ಕೆ ನಾಮ, [ರುದ್ರನೆಂಬ ಹಣಿಗೆ ವಿಭೂತಿ],
[ಗಂಧ ಬ್ರಹ್ಮನಿಂದಲಾಯಿತ್ತು], ನಾಮ ವಿಷ್ಣುವಿನಿಂದಲಾಯಿತ್ತು
ವಿಭೂತಿಯು ರುದ್ರನಿಂದಲಾಯಿತ್ತು.
ಇದಕ್ಕೆ ನಿರ್ಣಯವು-
ಪಾದ ಪಾತಾಳ, ಉತ್ಪತ್ತಿ ಸ್ಥಿತಿ ಲಯಕ್ಕೆ ಬಂದಕಾರಣ
ಗಂಧ, ವಿಭೂತಿ, ನಾಮ ಇಡಬೇಕಾಯಿತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Brahmage gandha, viṣṇuvige nāma, rudrage vibhūti
brahanemba śirakke gandha,
viṣṇuvemba urakke nāma, [rudranemba haṇige vibhūti],
[gandha brahmanindalāyittu], nāma viṣṇuvinindalāyittu
vibhūtiyu rudranindalāyittu.
Idakke nirṇayavu-
pāda pātāḷa, utpatti sthiti layakke bandakāraṇa
gandha, vibhūti, nāma iḍabēkāyitu kāṇā
ele nam'ma kūḍala cennasaṅgamadēvayya.