ಆರ ಸಂಗದೊಳಿಪ್ಪುದನಾರು ಬಲ್ಲರು?
ಆರು ಸಂಗದೊಳಿದ್ದ ಕಾರಣವು
ಪರಿಚಾರಕರು ನಾಲ್ವರು ಆಚಾರ್ಯರು(ರ?) ಮಣಿಹವನೆ
ಮಾಡುತ್ತಿದ್ದರು; ಯಾರುಯಾರೆಂದರೆ,
ಇಂದ್ರಿಯ, ರೇವಣಸಿದ್ದೇಶ್ವರ; ಮನ, ಮರುಳಸಿದ್ದೇಶ್ವರ;
ಮರುತ, ಏಕೋರಾಮೇಶ್ವರ [ನೆನಹು ಪಂಡಿತಾರಾಧ್ಯ];
ಇಂತೀ ನಾಲ್ವರು ಅರಸುಗಳು,
ಅಂಗದೊಳು ಇರಲಿಕ್ಕಾಗಿ ಇರುವರು,
ಅಂಗವ ಬಿಡಲಿಕ್ಕಾಗಿ ಬಿಡುವರು.
ಪರಬ್ರಹ್ಮವಸ್ತು ಒಳಗಿದ್ದು ತೊಲಗದಾಗಿ,
ಇಂದ್ರಿಯ ಚೈತನ್ಯ ಹೋಗಲಾಗಿ
ಮನಕ್ಕೆ ಮರವೆ ಕವಿಯಲಾಗಿ ಮಾರುತ ನಿಂತಿತು.
ಮಾರುತ ನಿಲ್ಲಲಿಕೆ ನೆನಹು ಬಯಲಾಯಿತ್ತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Āra saṅgadoḷippudanāru ballaru?
Āru saṅgadoḷidda kāraṇavu
paricārakaru nālvaru ācāryaru(ra?) Maṇihavane
māḍuttiddaru; yāruyārendare,
indriya, rēvaṇasiddēśvara; mana, maruḷasiddēśvara;
maruta, ēkōrāmēśvara [nenahu paṇḍitārādhya];
intī nālvaru arasugaḷu,
aṅgadoḷu iralikkāgi iruvaru,
aṅgava biḍalikkāgi biḍuvaru.
Parabrahmavastu oḷagiddu tolagadāgi,
indriya caitan'ya hōgalāgi
manakke marave kaviyalāgi māruta nintitu.
Māruta nillalike nenahu bayalāyittu kāṇā
ele nam'ma kūḍala cennasaṅgamadēvayya.