Index   ವಚನ - 180    Search  
 
ಕುಲದಲ್ಲಿ ಹುಟ್ಟಿದವಂಗೆ ಜನ್ಮ(ಅನ್ನ?) ಅಗ್ಗವಣಿ ಎಂದನು. ನರಮಾನವರಿಗೆ ಭಕ್ಷ್ಯ ಸ್ವಯಂಪಾಕವೆಂದನು. ದೃಷ್ಟದೇಶಿಯನಾಳ್ವಂಗೆ ಅರ್ಥ ಪ್ರಸಾದಿ ಎಂದನು. ಇಂತಿದರೊಳಗೆ ಇದ್ದವಂಗೆ, ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ತೀರ್ಥವಿಲ್ಲ, ಪ್ರಸಾದವಿಲ್ಲ ನುಡಿಯಿಲ್ಲ, ಭಾವವಿಲ್ಲ, ಭಕ್ತಿಯಿಲ್ಲ; ಮುಂದೆ ನರಕವೆಂದು ತಿಳಿವುದು ಸತ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.