ಸಾಕ್ಷತ್ ಬಾವನ್ನವ ಹೀಕುಜಾಲಿ ಹಳಿದರೇನು,
ಮಾಕೊಂಬದೆ ಸುಗಂಧವು ದುರ್ಗಂಧಿಯ?
ತಾಕುವುದು ನಾಸಿಕಕ್ಕೆ ಸುವಾಸನೆಯಲ್ಲದೆ [ಅನ್ಯವ] ನೆನೆಯದು,
ಸೂಕರವು ಗಜವ ಹಳಿದರೇನು, ಪ್ರಾಪ್ತಿ ಕುಂದಿತ್ತೆ?
ದೀಕ್ಷೆ ಉಪದೇಶ, ಪರಮಗುರುವಿನ ವಿವೇಕ ಜ್ಞಾನ
ಆಕಾರವು ಇಷ್ಟಲಿಂಗ ಸಂಬಂಧ, ವಿಭೂತಿ ರುದ್ರಾಕ್ಷಿ
ನೀಕರಿಸಿಬಿಟ್ಟ ಶರಣಂಗೆ ನಿಂದೆ ವಂದನೆ ಎರಡು ಇಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Sākṣat bāvannava hīkujāli haḷidarēnu,
mākombade sugandhavu durgandhiya?
Tākuvudu nāsikakke suvāsaneyallade [an'yava] neneyadu,
sūkaravu gajava haḷidarēnu, prāpti kunditte?
Dīkṣe upadēśa, paramaguruvina vivēka jñāna
ākāravu iṣṭaliṅga sambandha, vibhūti rudrākṣi
nīkarisibiṭṭa śaraṇaṅge ninde vandane eraḍu illa kāṇā
ele nam'ma kūḍala cennasaṅgamadēvayya.