ನಿಂದೆ ವಂದನೆ ಎರಡು ಅರಸುವ
ಅಂಧಕ ಗುರುವಿಗೆ ಮಂದಮತಿ
ಮಾರ್ಗ ಲೋಕಾಚಾರ, ಮರಣಾಂತಿಕ ಕಾಲ
ನಿಂದೆಯ ಜನರಿಂದ ಅಪ್ಪುದೇನು
ಹೊಂದುವುದು ಪರುಷ.
ಸೂನೆಗಾರನ ಮನೆಯ ಕತ್ತಿಯೆಂದು ಹೆರೆ ಹಿಂಗುವುದೆ?
ನೊಂದು ಸೈರಿಸಿದಾತ ಗುರು.
ನಿಂದೆಗೆ ಸಂದೇಹಪಡದ ಕಾರಣದಿಂದಲಿ
ಆನಂದಮಯ ಗುರುಗುಹೇಶ್ವರನಲ್ಲಿ ಐಕ್ಯನಾಪ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.