Index   ವಚನ - 188    Search  
 
ಅಜಾತಭಕ್ತಂಗೆ ಅಮಳೋಕ್ಯಲಿಂಗ, ಆಕೃತಿ ಸುಸಂಗ ಆಜಾತ ಜಂಗಮಸಹಿತಿ ಶೋಭಿತ, ವಿಜಯ ತ್ರಿಮುದ್ರಾಧರ ಖಂಡಿತ ಮಂಡಿತ, ಸಾಜಲಂಕಾರ ಅಚಲಾಂಗಸ್ಥಾಪಿತ, ರಾಜಿತ ರಾಜಯೋಗ ಶಿವಭಕ್ತಿಂ ಶಿವಯೋಗ. ಅಜಾತ ಕೂಡಲಸಂಗನ ಶರಣ, ಶೂನ್ಯಸ್ಥಲ ಸೆಜ್ಜೆ ಆತ್ಮಲಿಂಗ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.