Index   ವಚನ - 189    Search  
 
ಪಾದತೀರ್ಥ ಪ್ರಸಾದ ಜಿಹ್ಹೆಯಲ್ಲಿ ಉಂಟು ಎಂದು, ಉಪ್ಪರಕ್ಕೆ ಮೆರೆವ ಅಣ್ಣಗಳಿರಾ ನೀವು ಕೇಳಿರಯ್ಯ: ಪಾದತೀರ್ಥಯೋಗ್ಯವೆಲ್ಲಿಗೆ? ಪ್ರಸಾದ ಯೋಗ್ಯವೆಲ್ಲಿಗೆ? ಪಾದ ಕೊಟ್ಟಂವಗೆ ಉಂಟು ಕೊಂಡವಂಗೆ ಉಂಟು; ಹಾದಿಯ ತಪ್ಪಿ ಅಡವಿಯ ಕೂಡಿತ್ತು ಸ್ವಾದವಂ ಬಿಟ್ಟು ಹಿಪ್ಪಿಗೆ ಹಾರಿತ್ತು. ಉದರಪೋಷಣಕ್ಕೆ, ಯುಗಕಲ್ಪನೆಯಂ ಮರೆದು ಜಗದಂತೆ ಅಳಿಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.