Index   ವಚನ - 200    Search  
 
ಸಂಗದೋಷದಿಂದ ಭಂಗಪಡಬೇಕಾಯಿತು. ಲಿಂಗವೆಂಬ ಕಾರಣದಿಂದಲಿ ಕಲಿಗಣನು ಶಾಪ ತದ್ಗತನಾದ. ಅಂಗಹೀನರಿಗೆಲ್ಲ ಲಿಂಗೈಕ್ಯಸ್ಥಲ ಸಿಕ್ಕವುದೆ? ಜಂಗಮ ಎನಿಸಿಕೊಳ್ಳಬಹುದೆ? ಜಾರ ಸ್ತ್ರೀಯಳಿಗೆ ಪತಿವ್ರತೆಗೆ ಎಷ್ಟು ಎಂಬೆ ಅಂತರವು! ಕಂಗಳು ಇದ್ದು ಕಂಗುರುಡರಾದರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.