Index   ವಚನ - 202    Search  
 
ಬಲ್ಲತನ ಬಲ್ಲಿದತನ ಸಲ್ಲದು ಸರ್ವರಿಗೆ. ಅಲ್ಲವಾದುದ ಅಹುದು ಮಾಡುವರೆ, ಶಕ್ತರೆ? ಬಲ್ಲತನ ಬಲ್ಲಿದತನಕ್ಕೆ ಎಷ್ಟರ ಕೂನವಯ್ಯ? ಎಲ್ಲವನು, ತನ್ನೊಳು ತಾನು ಅರಿತಾತನೆ ಮುಕ್ತ ಅಲ್ಲ[ವು] ಸುಂಟಿ ಸುಂಟಿ[ಯು] ಅಲ್ಲವಾದಂತೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.