Index   ವಚನ - 209    Search  
 
ಪ್ರಕಟಕ್ಕೆ ಬಂದ ಸೋಹಂ ಭವಪ್ರಕೃತಿ, ಬಿನ್ನವಪ್ಪುದೇನಯ್ಯ? ಶತವರುಷ ತಪಸಿದ್ದರೇನು, ಸತಿಯಿಲ್ಲದಿರೆ ಸದ್ಗತಿಯಲ್ಲ ಲಿಖಿತಾರ್ಥ ಕಡಿತವಾಲೆ ಕಂಠದಲ್ಲೆ, ಹಾವಪ್ಪುದೆ(?) ಸುಖದುಃಖದ ಒಡಲು? ನಖ ತಿಂದಲ್ಲೆ ತುರಿಸಲು ಸೊಕ್ಕೆ ಮುರಿವುದಂತೆ. ಪ್ರಕೃತಿ ಬಿನ್ನವಾದರೆ, ತಪಸ್ಸು ಹಾನಿಯಪ್ಪುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.