ಷಡುಚಕ್ರವರ್ತಿಗಳು ಮುಂತು ಸಂಸಾರದೊಳು ಸಾಮಾನ್ಯರಾದರು.
ಪೊಡವಿಯೊಳು ಪೊಳ್ಳು ಪಟಾಂತ್ರಕ್ಕೆ ಪ್ರಾರಬ್ಧರದರು.
ನುಡಿನಡೆಯಿಂದ ಕುಂದು ಹೊಂದಿ ಬಂದರು.
ಅಡಿಅಡಿಗೆ ವರಕೃಪೆಗಳಿದ್ದು ವಸ್ತವಿನ ಮರೆದರು.
ನುಡಿದರು ಒಬ್ಬರೊಬ್ಬರಿಗೆ ಬಲ್ಲಿದರೆಂದು, ನೂತನ ವಾಕ್ಯವ
ಕಡೆಗಂಡವರಿಲ್ಲ ನಿಮ್ಮ ಕರುಣ ಕೃಪೆ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.