Index   ವಚನ - 220    Search  
 
ಕುಲದೆಂಜಲು ಕುಲಕಾಯಕದಲ್ಲೆ ಹೊಂದುವುದು. ಹಲವು ಉದ್ಯೋಗದ ಹಂಬಲವ ಬಿಟ್ಟವರಾರು? ಹೊಲೆಯ ಸತ್ತ ದನವ ತಿಂದು, ಎಲವು ಮೊಳೆಯವ ತಿಂದು ಸೀಪಿ ಬಿಸುಟ ಚರ್ಮದೊಳಗಣ ಎಣ್ಣೆತುಪ್ಪವ[ತಿಂದು] ಸ್ಥೂಲದೆಂಜಲು ಸೂಕ್ಮ ಕಾರಣ ತೆತ್ತೀಸುಕೋಟಿ ದೈವಕ್ಕೆ. ಎಲೊ ಮಾನವ ನಿನ್ನಪಾಡೇನು? ಎತ್ತಣ ಕುಲವು? ತೊಲಗಿ ಹಂಬಲಪಡುವರೆ ಹರಿಸುರಬ್ರಹ್ಮಾದಿಗಳಳವೆ? ಕುಲ ಗಂಡು ಹೆಣ್ಣು ಎರಡೇ ಫಲವಿಲ್ಲ ಮಿಕ್ಕಣ ಕುಲಿಂಗಿಗಳಿಗೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.