Index   ವಚನ - 221    Search  
 
ಆವ ಕುಲದೊಳು ಹುಟ್ಟು, ಆವ ಭೂಮಿಯ ಮೆಟ್ಟು, ಜೀವನವೆಂಬುದು ಜಾವ ಜಾವದ ಹುಟ್ಟು. ಜಾವದೊಳು ಸಾವಿರಕೆ ಶರೀರ ಸತ್ತು. ಆವ ಕುಲದ ಮಾತು, ನೋವು ಬೇನೆ ನೋಟಕೂಟಮಾಟಕೆ ಅವುದು ಕುಲ? ಆವಗೆ ಸುಗಂಧ ದುರ್ಗಂಧವು ಸುಯ್ಯದು ನಾಸಿಕದಲ್ಲಿ? ದೇವಾದಿದೇವತೆಗಳಿಗೆ ಅಳವಡೆದೆ ಹೋಗಿ, ದೈವವೆಂದು ಹಿಡಿವರೆ? ದೈವ ಅಕ್ಕುಲ, ತಮಗ್ಯಾಕೊ ಕುಲ? ದೈವವೆಂದು ಹಿಡಿವರೆ? ದೈವ ಅಕ್ಕುಲ, ತಮಗ್ಯಾಕೊ ಕುಲ? ಕೇವಲ ಲಿಂಗಕ್ಕೆ ಕುಲಶೂನ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.