ಅನ್ನಕೆ ಹುಟ್ಟಿದವು ಅನ್ನದೈವವು.
ಹೊನ್ನು ಹೆಣ್ಣು ಮಣ್ಣು ತ್ರಿವಿಧ ಅಕ್ಕುಲ.
ತನ್ನ ಶರೀರಸೂತಕ ಬದ್ಧಮಲ.
ಕನ್ನ ಕಳವು ಕಾಯಕಕೃಷಿ ಕಪಟ ಮಾರ್ಗ.
ನನ್ನ ಕುಲ ಶ್ರೇಷ್ಠವೆಂಬ ಕುನ್ನಿಗಳೆ ಕೇಳಿ,
ತಿನ್ನುವರೆ ಹುಳಿಗಾಯ, ತಿಂದು ಗಾಳಿಗೆ ಹಲ್ಲ ತೆರೆದಂತೆ
ಚೆನ್ನಯ್ಯ ಕುಲ, ಬಸವಣ್ಣ ಅಕ್ಕುಲ, ಅಲ್ಲಮಯ್ಯ ಅಧಮಕುಲ
ಇನ್ನು ಅವರ ಅಂಶದ ಬಳ್ಳಿ ಅರವತ್ಮೂವರು ಪುರಾತರು
ಕುನ್ನಿ ತಾಯಿ ಕಂಡು ಬಾಲ ಬೀಸದಂತೆ ಆಯಿತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.