Index   ವಚನ - 229    Search  
 
ಏಕಲಿಂಗನಿಷ್ಠಾಪರ ಲೋಕವಿರಹಿತಶರಣ. ಕಾಕುದೈವವ ಹಿಡಿದು, ಕಾಯಪ್ರಾಣದೊಳು ದ್ವಂದ್ವವಾಗಿಹ[ನೆ?] ಏಕಾಂಗಿ ಅದರಿಂದ ಲಿಂಗನಿಷ್ಠನಾದ. ಆ ಕುಲ ಈ ಕುಲ ಎನ್ನದೆ ಸತ್ಯಸದಾಚಾರವೆಂಬುದೆ ಉತ್ತಮ ಕುಲ. ಪಾಕುಳ ನುಡಿ, ಹಲವು ಪಾಷಾಣಕ್ಕೆ ಎರಗುವ[ದು] ಪಾಷಂಡಿಯ ನುಡಿ. ಆ ಕುಲ ಈ ಕುಲ ಏಕತ್ರವೆಂದು ಇದ್ದಾತನೆ ಸಂಗನ ಶರಣ. ಮಾಕೊಂಡು ನುಡಿದರೆ ತಲೆ ಸಹಸ್ರಹೋಳು ಅಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.