Index   ವಚನ - 230    Search  
 
ತುರುಕ ಸ್ಥಲಕ್ಕೆ ನರಕಪ್ರಾಪ್ತಿ ಇಲ್ಲ. ಅರಿತು ನಡೆ ಅನರ್ಘ್ಯ, ಮರ್ಕಟನಂತೆ ಹಲವು ದೈವಕೆ ಹಲುದೆರೆವುದಿಲ್ಲ. ಎರಕ ಕಂಚನೆರೆದಂತೆ ಏಕಲಿಂಗನಿಷ್ಠೆ. ಪರಕೆ ಪರಕಾಯಪ್ರವೇಶ. ಪ್ರಾಣಕ್ಕೆ ಕಾಯಕ್ಕೆ, ದ್ವಂದ್ವ ಅರಿತು ನಿಷೇದವಿಲ್ಲ. ಹಲವು ಕಾಯಕ, ಹಸಿವು ತೃಷೆಗೆ ಬಾರದ್ದರಿಂದ ಬಹುಸೂತ್ರಕೆ ತಂತು. ತುರುಕ ಬಹದಿಗೆ ಸಿಕ್ಕ ಶಾಸ್ತ್ರವು ಸಟೆ ಪುರಾಣ ಪುಲ್ಪಿಗೆ. ತುರುಕನಾಗಿ ಬಂದು ತುರೀಯ ಮೆಟ್ಟುವುದು ತುಟಾಗ್ರ. ಅರ್ಥನೀತಿ ಮುಂತು, ಇಪ್ಪುದು ನಾಲ್ಕು ಬಳಿ ಹಿಂತು. ಮೂರ್ಖರಿಗೆ ಮಾನ, ಮುಗ್ಧರಿಗೆ ಬುದ್ಧಿ, ತುರುಕನೇ ದೈವ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.