Index   ವಚನ - 232    Search  
 
ಪೃಥ್ವಿಯೊಳಡಗಿತ್ತು ತ್ವಕ್ಕಿಂದ್ರಿಯ, ಅಪ್ಪುವಿನೊಳಡಗಿತ್ತು ಜಿಹ್ವೇಂದ್ರಿಯ ತೇಜದೊಳಡಗಿತ್ತು ನಯನೇಂದ್ರಿಯ, ವಾಯುವಿನೊಳಡಗಿತ್ತು ನಾಸಿಕೇಂದ್ರಿಯ ಆಕಾಶದೊಳಡಗಿತ್ತು ಕರ್ಣೇಂದ್ರಿಯ ಇಂತು ಪೂರ್ವವನಳಿದರೆ ಪುನರ್ನವವಿಳಿಯಿಂತಿಂತು ಅಂತು ಪೂರ್ವವಪ್ಪುದೆ ಕಾಯ, ಪುನರ್ನವವಪ್ಪುದೆ ಪ್ರಾಣ ಕಾಯ ಪೂರ್ವ, ಪ್ರಾಣ ಅಪೂರ್ವ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.