Index   ವಚನ - 233    Search  
 
ಗುರುವೆಂಬ ತಥ್ಯ, ಲಿಂಗವೆಂಬ ತಥ್ಯ, ಜಂಗಮವೆಂಬ ತಥ್ಯ ಪರಮವಸ್ತುವೆಂಬ ಪಕ್ಷಿಯ ಹುದುಗಿನೊಳಗೆ ಇದ್ದ ಪರಿಯುಂತು ಹೇಳಾ ಅಯ್ಯ! ಗರಿಯ ಮೊನೆಯಲ್ಲಿ ಗಾಳ ಮೂಡಿತು, ಹೊರಚರ್ಮದಲ್ಲಿ ಭೂಮಿ ಮೂಡಿತು, ಉರದಲ್ಲಿ ಅಗ್ನಿ ಮೂಡಿತು, ಶಿರದಲ್ಲಿ ಜಲ ಮೂಡಿತ್ತು, ಧುರಪಾದದಲ್ಲಿ ಆಕಾಶ ಮೂಡಿತ್ತು. ಈಸು ತತ್ವದ ತಥ್ಯೆಯ ಮೂಲವು. ಪರದಲ್ಲಿ ಇಟ್ಟ ಅಪರ, ಅಜಾಂಡ ಬ್ರಹ್ಮಾಂಡ ಅಪರಾಂಡ ತತ್ವದೊತ್ತಿನ ಸ್ವಯಪರವಸ್ತುವಿನ ನಿರವು ನಿರಾಲಂಬ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.