ಇಂತಪ್ಪ ತತ್ವದ ತಥ್ಯೆ, ಅಂತು ಉಪದೇಶಕ್ಕೆ ಉಪದೇಶ.
ಮಂತ್ರ, ಗುರುವೆಂಬ ತಥ್ಯೆಯಲ್ಲಿ ಪುಟ್ಟಿತ್ತು.
ಯಂತ್ರ, ಲಿಂಗವೆಂಬ ತಥ್ಯೆಯಲ್ಲಿ ಪುಟ್ಟಿತ್ತು.
ಅಂತರಾಂತರ[ವು] ಜಂಗಮವೆಂಬ ತಥ್ಯೆಯಲ್ಲಿ ಪುಟ್ಟಿತು.
ಇಂತು ಈ ಮೂರು ತಥ್ಯೆಯ
ಮೂಲ್ಯವ ಅರುಹಿದಾತ ಪರವಸ್ತುವು.
ಭಕ್ತಿಗೆ ಬುಡ, ಯುಕ್ತಿಗೆ ಕೊನೆ, ಮುಕ್ತಿಗೆ ನಡುವು
ಅರ್ಥೈಸೆ ಆರ ಅಳವಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Intappa tatvada tathye, antu upadēśakke upadēśa.
Mantra, guruvemba tathyeyalli puṭṭittu.
Yantra, liṅgavemba tathyeyalli puṭṭittu.
Antarāntara[vu] jaṅgamavemba tathyeyalli puṭṭitu.
Intu ī mūru tathyeya
mūlyava aruhidāta paravastuvu.
Bhaktige buḍa, yuktige kone, muktige naḍuvu
arthaise āra aḷavalla kāṇā
ele nam'ma kūḍala cennasaṅgamadēvayya.