ಇನ್ನು ಪೂರ್ವವನ್ನು ಅಳಿವ ಪಥ ಅನ್ಯಾಯ ಅನ್ಯಾಯ.
ಮುನ್ನಿನ ಗುರುಶಿಷ್ಯ ಇನ್ನು ಶಿಷ್ಯಗುರು.
ಇನ್ನು ಪುನರ್ಜಾತ ಅಜಾತ ಚನ್ನಪ್ರಭು.
ಆದಿ ಅಪರಾದಿ, ಮಾನ್ಯಕುಲ ನಿಃಕುಲ, ಅನ್ಯಕುಲ ಸಕಲ
ಅನ್ನ ಆಚಾರಿದ ಶಿವಾಚಾರವಿಡಿದು ಮನ್ನೆಯ ಕುಲನಾಸ್ತಿ,
ಶರಣಸತಿ ಲಿಂಗಪತಿ ಚಿಹ್ನ ದಿವರಾತ್ರಿ ಏಕದಿನ
ಶೂನ್ಯಸ್ಥಲ ಅಚಾರ.
ಪುಣ್ಯಾತ್ಮ ಆತ್ಮ, ಪೂರ್ವ ಅಪೂರ್ವ,
ಪೃಥ್ವಿನಿವಾಸ ಚನ್ನದಂಡೇಶ್ವರನ ಪುನರ್ದೀಕ್ಷೆ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.