Index   ವಚನ - 247    Search  
 
ಕುಲಾಚಾರವಂ ಬಿಡದೆ ಶಿವಾಚಾರಿಗಳೆಂಬ [ಕುಲಕರ್ಮಿಗೆ] ಸಿಕ್ಕುವನೆ ಲಿಂಗ? ಲವಲೇಶ ವಿರಕ್ತ XXXXXX ಅವಕಾಲದೊಳು ಇಲ್ಲ, ಶಿವರಾತ್ರಿ ಅಲ್ಲ, ಶಿವಾಚಾರಕ್ಕೆ ಸಲ್ಲ ಕೌದಿಯೊಳು ನಾಯಿ ಹೇತಂತೆ ಆಯಿತ್ತು ಡಂಬಿನ ಭಕ್ತಿ ಶಿವಭಕ್ತಂಗೆ ಕುಲಾಚಾರವೆಂಬುದು ಖೋಡಿ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.