Index   ವಚನ - 277    Search  
 
ದಾರಿದ್ರೈ[ಕೆ] ದಯವುಂಟು, ದೈನ್ಯವುಂಟು, ಕೋಪಕ್ರೋಧವಿಲ್ಲ ಭೂರಿವೆಚ್ಚವಿಲ್ಲ ಭೂಷಣವಿಲ್ಲ, ಚೋರಭಯವಿಲ್ಲ, ರಾಜಭಯವಿಲ್ಲ ಸೇರಿದರೆ ದರದ್ರನಲ್ಲೆ ಸೇರುವುದು ಭಕ್ತಿ. ಕಾರ್ಯಕಾರಣವೆ ಧರ್ಮ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.