Index   ವಚನ - 292    Search  
 
ಸಂಸಾರ ಸಕಲಕರ್ಮಕಾಂಕ್ಷೆ. ಆಶಾಬದ್ಧದಿಂ ಮಂಸಾಹಾರ ಮಧ್ಯಪಾನ. ತಿಳಿಯ ಮದೋನ್ಮತ್ತ[ತೆ], ತಿಳಿವುದು ಹಿಂಸೆಯು ಜೀವನ ಕೊಲೆ ಕ್ರೋಧ ಕಪಟ ಅಂಕಿತ ಕರ್ಮ ಅಖಿಲ ಆಶಾಬದ್ಧದಿ. ನಿಶ್ಯಂಕೆ ಸಮುದ್ಭವ ಸಂಚಲದೂರ ಸಂಸಾರ ಕ್ರೂರ ಸಂಕ್ಷತಿ ಅಜಾತಗೆಂತಪ್ಪುದಯ್ಯ? ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.