Index   ವಚನ - 300    Search  
 
ಪ್ರಭುಲಿಂಗಲೀಲೆಯ ಪಠಿಸುವ ಪಾಠಕರೆಲ್ಲ ಸಟೆಕರು. ಅಟಮಟರಿಗೆ ಎತ್ತಲಯ್ಯ ಲೀಲೆಯ ಸಂಪರ್ಕವು? ಕುಟಿಲಕ್ಕೆ ಕುಬುದ್ಧಿಯಲ್ಲದೆ ಸುಬುದ್ಧಿಯಹುದೆ? ಮಠಮಾಟ ನಾಲ್ಕು ಆಚಾರವು. ಪಠಿಸುವರೆ ಕ್ರಿಯೆ ದೂರ, ನಿಃಕ್ರಿಯೆ ದೂರವು ಅಕಟಕಟ ಜನ ಕೆಟ್ಟ ಕೇಡಿಂಗೆ ಕಡೆಮೊದಲಿಲ್ಲವು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.