Index   ವಚನ - 302    Search  
 
ಅಸ್ಥಿರ ಸ್ಥಿರವಪ್ಪುದೆ ಅನಂತ ಪ್ರಯಾಸಪಟ್ಟರೆ? ವಸ್ತು ಸಿಕ್ಕುವನೆ ಒಲುಮೆಗೆ ಮೈಮರೆದಲ್ಲದೆ? ಕಸ್ತೂರಿ ಕಂಚು ಬೆಸದಂತೆ ಕ್ಯಾರೆಣ್ಣೆಯ ಪ್ರತಿಮೆಗೆ. ಹಸ್ತಪ್ರಾಪ್ತ ಬೈದರೆ ಬೈಗಳು ಕೈಯಮೇಲೆ, ಹೊಯ್ದರೆ ಹೊಯ್ಗಳು ಕೈಯಮೇಲೆ. ವಿಸ್ತೀರ್ಣ ವಿಶಾಲವಾದಲ್ಲದೆ ವಸ್ತು ನಿವಾಸಾಗ[ದು] ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.