Index   ವಚನ - 303    Search  
 
ಮತ್ಸರದೇಹಿಗಳು ಸೇರರು, ಎಚ್ಚರಿಕೆಯನೆತ್ತಬಲ್ಲರಯ್ಯ? ಉಚ್ಚರಿಸಿದರೇನು, ಶಾಸ್ತ್ರಪುರಾಣವ ಮೂರ್ಖತನದಲ್ಲಿ ಉಚ್ಚಿಷ್ಟದೊಳು ಕೈತೊಳೆದು ಪಾಯಸವ ನೀಡಿದಂತೆ. ಮತ್ಸರದಿಂದ ಮನಮಿಥ್ಯಗಳು, ಮನ ಮಲಿನವಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.