Index   ವಚನ - 304    Search  
 
ಗುರುವಿನ ಅರುಹ ಮರೆದಲ್ಲಿ[ಯೆ] ಲಿಂಗ ಕರುಹು ಆಯಿತು. ಪರವಸ್ತು ಜಂಗಮ[ವು] ರೂಪೆಂದು[ದು] ಸಂಗದೋಷದಿಂದ. ತೊರೆ ಒಣಗಿ ತೀರ್ಥ, ಪ್ರಸಾದ ಪ್ರಸನ್ನಿಕೆ ಪ್ರಯಾಸ. ಮರೆವಿಡಿದು ಅಂಗವಿಕಾರಿ, ಭಕ್ತನಾದ ಅನಾಚಾರಿ. ಪರುಷ ತ್ರಿವಿಧವ ಕುರುಹಿಂಗೆ ತರಬಹುದೆ? ಅರಿತು ಅರಿಯದೆ ಅಲ್ಪಾಯುಷ್ಯವಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.