Index   ವಚನ - 305    Search  
 
ಕುರುಹು ಲಿಂಗವೆಂಬ ನರಿಮನ[ದ] ಭ್ರಾಂತರೇನಬಲ್ಲರಯ್ಯ? ವರಕೃಪೆಯುಳ್ಳ ವಸ್ತು ನಿರಂಜನಲಿಂಗ ಕುರುಹು ಆಗಬಲ್ಲುದೆ? ಸೋರೆಕಾಯಿ ಉದಯಸ್ತಮಯ ತೊಳೆದರೆ ವಿಷ ಹೋಪದೆ? ಪರಮಾರ್ಥ ಲಿಂಗವನು ಬಿಟ್ಟು ಪಾಷಾಣಕ್ಕೆ ಎರಗಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.