Index   ವಚನ - 307    Search  
 
ಪರಿಪೂರ್ಣ ಸಂಪೂರ್ಣ, ಸಂಪೂರ್ಣ ಪ್ರಸನ್ನಪೂರ್ಣ. ಪರಿಮಳಲಿಂಗಕ್ಕೆ ಪತ್ರಪುಷ್ಪವನರ್ಪಿಸುವುದು ಪ್ರಯಾಸ. ಪರಬ್ರಹ್ಮ ಜ್ಯೋತಿರ್ಮಯಲಿಂಗಕ್ಕೆ ದೀಪಾರಾಧನೆ ಎತ್ತುವುದು ಪ್ರಯಾಸ. ಪರಮಹಂಸ ನಿತ್ಯತೃಪ್ತಲಿಂಗಕ್ಕೆ ನೈವೇದ್ಯವನರ್ಪಿಸುವುದು ಪ್ರಯಾಸ. ಪರಿತಾಯ ಸಕಲಕ್ಕೆ ಅಕಲ್ಪಿತವುಂಟೆ? ನೆರೆನಂಬದ ಇಷ್ಟಲಿಂಗಸಂಬಂಧಿಗೆ ಯಾಕೊ ಅಷ್ಟವಿಧಾರ್ಚನೆ? ಕುರುಹ ಅರುಹಿನೊಳಿಡುವರೆ ಹರಿಸುರಬ್ರಹ್ಮಾದಿಗಳಿಗೆ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.