Index   ವಚನ - 314    Search  
 
ಮೂಲಮಂತ್ರದ ಅರಿವು, ಮುಗ್ಧ ಸ್ವರೂಪಗಲ್ಲದೆ ಮೂಲ ಪ್ರಬಂಧಿಗಳಿಗೆ ಸಿಕ್ಕುವುದೆ? ಸಾಲವ ಕೊಡಬಲ್ಲ ದೊರೆ, ಕೊಳಬಲ್ಲ. ಬೇಲಿಯೊಳು ಚೆಲ್ಲಿದ ಧಾನ್ಯವು, ಬೆಳೆಬೆಳೆದು ಹೊಂಬಾಳೆಯಪ್ಪುದೆ? ಮೂಲ್ಯವು, ತನ್ನೂಳು ತಿಳಿದುನೋಡುವುದು ಮೂಲಮಂತ್ರದ ಅರಿವು. ಸ್ಥೂಲದಲ್ಲಿ ತೆಂಗಿನ ವೃಕ್ಷವು, ಮೇಲುಗಾಯಿ [ಒಳಗೆ] ಅರಿತು ಆರಿ ಗಟ್ಟಿಗೊಂಡಂತೆ [ಇದು]. ಸ್ಥೂಲವ ಸೂಕ್ಷ್ಮದಲ್ಲಿ ಕಾಂಬುದು ಕಾರಣ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.