Index   ವಚನ - 316    Search  
 
ಒಬ್ಬರು ನುಡಿವ ನುಡಿ, ಒಬ್ಬರು ನಡೆದ ನಡೆ ಒಬ್ಬರಿಗೆ ಅಪ್ಪದೆ? ಕಬ್ಬು ಸಿಹಿ ಆಯಿತೆಂದು, ಕಣಕಿಯ ದಂಟು ಬಾಯಲ್ಲಿ [ಸಿಹಿ] ಅಪ್ಪುದೆ? ಗೊಬ್ಬರದೊಳಗಿನ ಚೇಳಿನಂತೆ, ಗೋಮಳದೊಳು ಮಾತು ಉಬ್ಬುಬ್ಬಿ ಬಸವಪುರಾಣ ಪ್ರಭುಲಿಂಗಲೀಲೆ, ಇದು ಇಬ್ಬರಿಗೆ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.