Index   ವಚನ - 317    Search  
 
ಗುರುವಿನ ಗುರುವು ಪರಮಗುರುವು ಪರಮಾರಾಧ್ಯ ಭಾರಯ್ಯ ನರರೇನು ಬಲ್ಲರು ಈ ಮೂಲಸ್ತಂಬವ? ಗುರುವನರಿವುದೆ ಮೈಮರೆದವಂಗೆ ಸಾಧ್ಯ. ಪರಮಗುರುವ ಅರಿವುದು ಪ್ರಾಣಪ್ರಣಮ ನಿಶ್ಯೂನ್ಯಂಗೆ[ಸಾಧ್ಯ]. ಪರಮ ಆರಾಧ್ಯನ ಅರಿವುದೆ ಬ್ರಹ್ಮಿಗಲ್ಲದೆ, ಪಾಮರರೇನಬಲ್ಲರಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.