ಅಂಗವ ತಿಳಿದಾತ ಭಕ್ತ, ಮಾಯವ ತಿಳಿದಾತ ಮಹೇಶ್ವರ,
ಅಭಿಪ್ರಾಯವ ತಿಳಿದಾತ ಪ್ರಸಾದಿ,
ಸ್ವಯಂ ತಿಳಿದಾತ ಪ್ರಾಣಲಿಂಗಿ,
ಏಕತ್ರಯವಂ ತಿಳಿದಾತನೆ ಶರಣ,
ತನ್ನ ಅಂತರಂಗವ ನಿಮ್ಮದೆಂದು ಅರಿತಾತನೆ ಐಕ್ಯ.
ಗ್ರಂಥದೊಳಲ್ಲಿ, ಸಾಕ್ಷಿಯೊಳಿಲ್ಲ;
ಇಂತಪ್ಪ ಷಡುಸ್ಥಲದೊಳು
ನಿಂತರೆ ನೀವು, ನಿಲ್ಲದಿದ್ದರೆ ಬೇಯುವ ಕಷ್ಟ.
ಅರಸುವಂತೆ ಅಂತು ಸಿಕ್ಕುವನೆ? ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Aṅgava tiḷidāta bhakta, māyava tiḷidāta mahēśvara,
abhiprāyava tiḷidāta prasādi,
svayaṁ tiḷidāta prāṇaliṅgi,
ēkatrayavaṁ tiḷidātane śaraṇa,
tanna antaraṅgava nim'madendu aritātane aikya.
Granthadoḷalli, sākṣiyoḷilla;
intappa ṣaḍusthaladoḷu
nintare nīvu, nilladiddare bēyuva kaṣṭa.
Arasuvante antu sikkuvane? Kāṇā
ele nam'ma kūḍala cennasaṅgamadēvayya.