ಕಾಯ ಹಣ್ಣಾದಬಿಳಿಕ ರಸವಿಲ್ಲ.
ರಸ ಬಲಿದ ಬಳಿಕ ಸಾರಾಯವಿಲ್ಲ.
ಹಸುಕು ಅಳಿದ ಬಳಿಕ ಪರಿಮಳವಿಲ್ಲ.
ವಿಷಯವಳಿದ ಬಳಿಕ ಪದವಿಲ್ಲ.
ಹಸನಾಗದು ಅಂಗ ಸ್ಥಾಪ್ಯದೊಳು,
ಒಂದು ಕುಂದಿದ ಬಳಿಕ ಪ್ರಸಾದಿ.
ಚನ್ನಬಸವಂಗೆ ಕೊಟ್ಟ ಕೈವಲ್ಯ ಶ್ರುತಿ.
ಅಶನಕ್ಕಾಗಿ ಮನೆಮನೆ ತಿರುಗುವಗೆ ಬೆಸನವಿಲ್ಲ.
ಸಸಿನಗೆ ಫಲ ಪಲ್ಲವಿಸುವುದೇನಯ್ಯ?
ವಸುದೆಗೆ ಸಿಕ್ಕದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.