Index   ವಚನ - 321    Search  
 
ಮುದ್ರೆ ಎಂಬುದು ಮೂರುಲೋಕ ಒಳಗೊಂಡಿದೆ. ಕಾಂಚಿನಸಿದ್ಧಿ ಲಾಂಛನಸಿದ್ಧಿ, ಉದರ ಕ್ಷುಪ್ತಿಯ ಕಪ್ಪರ, ಅಧಾರವೆ ಕಂತೆ, ನದಿಯೆ ಕಮಂಡಲ, ಮದುವೆ ದಂಡ, ಕ್ಷುಧಿಯುವೆ ಜೋಳಿಗೆ, ಹದಿನೆಂಟು ಧನ್ಯಾದ ಬಿಕ್ಷ ಇದಿರಿಟ್ಟುಕೂಟ್ಟಿವೆ ಉತ್ಪತ್ಯದ ಜನಿತದ ಜಂಘೆಗೆ. ಅದರೊಳು ಹುಟ್ಟಿ, ಸ್ಥಿತಿಯೊಳು ಮುಟ್ಟಿ ಅಳಿವುದಕೆ ಯಾತಕ್ಕೊ ಜಂಗಮಸ್ಥಲ? ಉದರ ಎಂಬತ್ನಾಲ್ಕು ಲಕ್ಷವ ಬೆಳೆ ಬೆಳೆದು ಒಬ್ಬುಳಿಯ ಮಾಡುವಾತ ಗುರುವು. ಅದರೂಳು ಸುಳುಹು ಸೂಕ್ಮದಲ್ಲಿ ಅಳೆದು ಅಳತೆಯ ಮಾಡುವಾತ ಲಿಂಗ. ತುದಿಯ ತಟ್ಟೆ ತಟ್ಟುಮುಟ್ಟು ಮುಟ್ಟದಾತ ಜಂಗಮ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.