Index   ವಚನ - 322    Search  
 
ವಿಭೂತಿ ವಿಭೂತಿ ಎಂದೆಂಬರು, ವಿಭೂತಿಯ ಮಾಹತ್ಮೆ ಎಂತಿಪ್ಪುದು ಹೇಳಾ? ಜಂಗಮಜನಿತನಾಶ್ರಯದ ಕಾರಣದಿಂದಲಿ ಭಕ್ತನ ಲಲಾಟ ಶೂನ್ಯ. ಭಕ್ತಭವನಾಶ್ರಯದ ಕಾರಣದಿಂದಲಿ ಜಂಗಮ ಲಲಾಟ ಶೂನ್ಯ. ಭಕ್ತಂಗೆ ಜಂಗಮಕ್ಕೆ ಇಲ್ಲದ ವಿಭೂತಿಯ ಅತ್ತಲಾರು ಬಲ್ಲರೊ, ಅದು ಮಹಾಘನ. ಷಡುಸ್ಥಲಕೆ ಭಕ್ತನೆ ಬುಡ, ಗುರುಸ್ಥಲಕೆ ಜಂಗಮವೆ ಕಡೆ. ವೃಕ್ಷದಲ್ಲಿ ಪುಟ್ಟಿದ ಬೀಜ ಬುಡ ಲಾಂಛನಕ್ಕೆ ಎಂತಾಯಿತೊ? ಆತ್ಮವಿಭೂತಿಯ ತಿಲಕವಿಕ್ಕಿದಾತ ಗುರುವು, ಸಿ(ಇ?)ಕ್ಕಿಸಿಕೊಂಡಾತ ಶಿಷ್ಯ ಮಕ್ಕಾಳಾಟವೆ ವಿಭೂತಿಯ ಸಂಬಂಧವೆಂಬುದು? ಕಕುಲಾತಿಯ ಮಸಣದ ಬೂದಿ ವಿಭೂತಿಯೆ? ತಾಕು ಭಕ್ತಿಗೆ ದುಃಖದ ವಿಭೂತಿ ಆಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.