Index   ವಚನ - 323    Search  
 
ಸದ್ಭಕ್ತನ ಹೃದಯದೂಳು ಪುಟ್ಟಿದ ವಿಭೂತಿಯ ಅತ್ತಲಾರು ಬಲ್ಲರೊ ಅಯ್ಯ? ಅದು ಮಹಾಭಸ್ಮ. ಉದಾಸಿ ಲಿಂಗಕ್ಕೆ ಮಜ್ಜನಕ್ಕೆರೆವುದು ಅದ ಕಂಡ ಪರಿಯೆಂತು ಹೇಳಯ್ಯ. ಆಧಾರದಿಂದ ಅಷ್ಟವಿಧಾರ್ಚನೆ ಷೋಡಶೋಪಚಾರವು. ಇದರೊಳಲ್ಲ ಅವು ಮಹಾಘನ ಅದೆ ಜಳಕ, ಅದೆ ವಿಭೂತಿ, ಅದೆ ಪೃಥ್ವಿ ಅದೆ ಸ್ವಾಮಿಯ ಸಮಸ್ತ. ಹೃದಯಮುಖದಲ್ಲಿ ಕತ್ತಲೆ ಕವಿದವಂಗೆ ಉದಸಿ ಲಿಂಗವೆಲ್ಲಿಯದೊ? ಮದದೂಳು ಮಾಯಾಪಾಶದೂಳು ಹೊರಳುವಂಗೆ ಸುದತಿ ಅಂತಃಕರಣದ ವಿಭೂತಿಯ ಸಡ್ಡೆ ಯಾತಕೊ? ಇದು ಕಾರಣ. ಸುದತಿಯ ಭಕ್ತಿ ಚನ್ನಬಸವಂಗೆ ಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.