ಆಚಾರ ಆಚಾರ ಎಂದೆಂಬರು.
ಆಚಾರ ಅಂಗಕ್ಕೆ ಅಳವಟ್ಟ ಪರಿಯೆಂತು ಹೇಳಾ?
ವಿಚಾರ ವಿಚಾರವೆಂದೆಂಬ ವಿಚಾರಭಿಕ್ಷಕ್ಕೆ
ಇದೆಂತಾದುದು ಹೇಳಾ
ಆಚಾರ ವಿಚಾರವುಳ್ಳವರು ಆನ್ಯಾಯಿಗಳಪ್ಪುವರೆ?
ಸೂಚನೆ ಆಚಾರ ಸುಚ್ಚೀಲ, ಸ್ಥಲವೆ ನೋಟತೃಪ್ತಿ
ಸುಪ್ತಾಚಾರ ಶ್ರುತಿ, ಸ್ಥಲವೆ ಕರ್ಣತೃಪ್ತಿ
ಸುಮಾನಾಚಾರವೆ ಶ್ರೀಗಂಧ, ಸ್ಥಲವೆ ನಾಸಿಕ ತೃಪ್ತಿ
ಸುಲಭಾಚಾರವೆ ಕ್ಷುಪ್ತಿ, ಸ್ಥಲವೆ ಜಿಹ್ವೆ ತೃಪ್ತಿ
ಇಂತು ವಿಚಾರ ಆಚಾರವಿಲ್ಲದೆ
ಭುಂಜಿಸುವಂಗೆ ಭಕ್ತಿ ಯಾತಕ್ಕೊ?
ಇದು ಕಾರಣ
[ಎಲೆ ನಮ್ಮ] ಕೂಡಲ ಚನ್ನಸಂಗಮದೇವಯ್ಯ
ನಿಮ್ಮ ಆಚಾರ ಶೂನ್ಯ ನಿಶೂನ್ಯ ಅಯ್ಯ.
Art
Manuscript
Music
Courtesy:
Transliteration
Ācāra ācāra endembaru.
Ācāra aṅgakke aḷavaṭṭa pariyentu hēḷā?
Vicāra vicāravendemba vicārabhikṣakke
identādudu hēḷā
ācāra vicāravuḷḷavaru ān'yāyigaḷappuvare?
Sūcane ācāra succīla, sthalave nōṭatr̥pti
suptācāra śruti, sthalave karṇatr̥pti
sumānācārave śrīgandha, sthalave nāsika tr̥pti
sulabhācārave kṣupti, sthalave jihve tr̥pti
intu vicāra ācāravillade
bhun̄jisuvaṅge bhakti yātakko?
Idu kāraṇa
[ele nam'ma] kūḍala cannasaṅgamadēvayya
nim'ma ācāra śūn'ya niśūn'ya ayya.