ಸಾಯಬಂದ ತನುವಿಂಗೆ ಸಾಹಿತ್ಯವೆಂತಿಪ್ಪುದಯ್ಯ?
ಕಾಯಿ ಎಳದು ಕೊಯಿದು ಬೀಜಕ್ಕೆ ಬಿಟ್ಟರೆ ಫಲವಪ್ಪುದೆ?
ದೇಹ ದುರ್ಗುಣಮಂ ಬಿಡಿದರೆ ದುರ್ಮುಖಿ ಶಿವನಪ್ಪನೆ?
ಆಯಿತ್ಯವಿಲ್ಲ ಸಾಹಿತ್ಯಕ್ಕೆ ಸಲ್ಲ
ತಾ ಮಾಡುವ ಕಾಯಕದೊಳು ಧರ್ಮ ಅಧರ್ಮ ವಿಚಾರಿಪಡೆ,
ಸಾಹಿತ್ಯವಿನ್ನು ಬೇರಿಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.