Index   ವಚನ - 331    Search  
 
ಸಟೆ ಸಾಹಿತ್ಯಮಂ ಕಟ್ಟಿ ಪಟುತರ ಸ್ವತಂತ್ರಲಿಂಗವ ಮರೆವುದು ಸದಾಚಾರವೆ? ಚಿಟಕೆ ಹಾಕಲು ಶ್ವಾನ ಬಪ್ಪಂತೆ ಬಪ್ಪದು ಸ್ವಯಂ ಮೂಲ್ಯವೆ? ನಿಟಿಲರನೆಲ್ಲ ನಿಜಗೆಡಿಸಿ ನಿತ್ಯ[ರ] ಅನಿತ್ಯರಂ ಮಾಡಿ ಕಟಕಿಯ ಉಪದೇಶ ಕರ್ಮವ ಕೂಡುವ ದ್ವಿಜಾತಿಗಹುದೆ ದಿಟಲಿಂಗ ಸಾಹಿತ್ಯ? ವಟವೃಕ್ಷದಡಿ ಬೀಜವ ಒಟ್ಟಿದ್ದರೇನಯ್ಯ, ದಿಟವೃಕ್ಷವಾಹುದೆ? ಅಟಮಟದ ಅನ್ಯಾಯಿಗೆ ಆಚಾರ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.