Index   ವಚನ - 332    Search  
 
ನಿಮ್ಮ ಭಕ್ತನೆ ಭಕ್ತ, ನಿಮ್ಮ ಯುಕ್ತನೆ ಯುಕ್ತ ನಿಮ್ಮ ಮುಕ್ತನೆ ಮುಕ್ತ. ನಿಮ್ಮ ವಂದನೆಯಲ್ಲದೆ ಅನ್ಯವ ವಂದಿಸುವ ಪಾಶಯುಕ್ತ. ಅನ್ಯಥಾ ನಾದ ಬಿಂದು ಕಳೆ ಮುನ್ನವೆ ಕಲ್ಪಿಸಿದ. ಅಯ್ಯಾ, ನಿಮ್ಮನರಿವುದಕ್ಕೆ ಸಾಕ್ಷಿಯನ್ನರಸುವ ತೊನ್ನು ಮೂಳರಿಗೆ ಇನ್ನು ಭಕ್ತಿ ಸಲ್ಲದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.