Index   ವಚನ - 345    Search  
 
ಗುರುತನ ಶಿಷ್ಯತನ ಕರುವ ಕಟ್ಟಿ ಕಂಚನೆರೆದಂತೆ ಕಾಣಯ್ಯ ಉರಿವುದು ಮ್ಯಾಣವು, ಮೈಗೊಡುವುದು ಗುರುತನವು. ಕರಗುವುದು ಕಂಚನು, ಎರಗುವುದು ತಾ ಶಿಷ್ಯನು. ಒರೆಬಣ್ಣವು ಕಾಣಿಸುವುದೆ ಒತ್ತಿದ ಮ್ಯಾಣಕ್ಕೆ ದೊರೆ ಬಂಟನು ಗುರು ಶಿಷ್ಯನು ಶಿಷ್ಯನು. ನೆರೆ ನೆಂಟನು ನಂಟಿನ ಬಂಟನು ಸುರಿಗೆ ಅಳವಡದ ಸೂಚನೆ ಇವರೊಳು. ಪರವಿನ್ನು ಅರಸಲು ಬೇರೆಯಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.