Index   ವಚನ - 359    Search  
 
ನಂಬದೆ ಕೆಡುವುದು ನಾಡೊಳು ಡಿಂಭ ಸಾಲಿಯ ಗೊರವರು, ಡಂಭಕದ ಭಕ್ತರು. ಮುಂಬಾಯಲ್ಲಿ ವಚನವಿದ್ದು ಮುರಿತವ ಮುರಿವರೆ? ಶಂಭುದ್ವಿತೀಯ ಭಕ್ತನ ಹಂಬಲ ಪಾದವ ಬಿಡದಿದ್ದರೆ, ಬಂಬ ದುರಿತಗಳೆಲ್ಲ ನಂಬಿ[ಗೆ]ಯಿಂದ ಬಯಲು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.