Index   ವಚನ - 366    Search  
 
ವರವು ಶಾಪ, ಕರುಣಕೃಪೆಯುಳ್ಳ ಪರಮಾರ್ಥನ ಕಾಣದೆ, ತರುಮರ ಶಿಲಾಸಂಬಂಧದೊಳು ಅರಸುವ ಕರುಬಗಿನ್ನು ಏನಂಬೆನಯ್ಯ? ಸ್ಥಿರ ಸಕಲವಿದ ಕಾಣದೆ ಗಿರಿಗಹ್ವರದೊಳು ತೊಳಲುವ ದರುಶನ ಆರಕ್ಕೆ ಮುಕ್ತಿಯಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.