Index   ವಚನ - 377    Search  
 
ಇದಿರ ತಾನರಿವುದು, ತನ್ನ ಇದಿರರಿವುದು ತುದಿ ಬುಡ ಏಕವೆಂದರಿವುದು. ಮೊದಲು ಮರಣ, ಕಡೆಯಲ್ಲಿ ಉತ್ಪತ್ತಿ ಎಂದರಿವುದು. ಉದಯ ಅಸ್ತಮಯ, ಅಸ್ತಮಯ ಉದಯವೆಂದರಿವುದು. ಸದಮಲ ಸಂಗನಶರಣಂಗೆ ಕುಲವಿಲ್ಲವೆಂದರಿವುದು. ಇದು ಅಗಲದ ಏಕಾಂಗಿ ನಿಮ್ಮ ಲಿಂಕನೆಂದರಿವುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.