ಲೋಕಕ್ಕೆ ಅಂಜಿ ಏಕತ್ರಯವನು ಬಿಡುವುದೆ?
ಸಾಕ್ಷಿಯ ಮೀರಿ ಸವರಾತ್ರಿಯ ನುಡಿವರೊ?
ಆ ಕಾಲದಿ ಕಲ್ಯಾಣದಲ್ಲಿ ನುಡಿದ ತಪ್ಪಿಗೆ
ಬೇಕಾಗಿ ಬಂದು ಬೆಲ್ಲವ ಕಹಿ ಮಾಡಿ, ಅಲ್ಲವ ಸಿಹಿ ಮಾಡಿ
ನಾಲ್ಕು ಯುಗದ ಹೊಂಡವ ತೊಳಿಸಿ,
ಮಂಡಲದೊಳು ಬೆಳಗ ಮಾಡಿ,
ಏಕಛತ್ರನೆನಿಸಿ ಯಶವ ಮುರಿದು ಪಾಶವ ನೋಡಿಸಿ(ತೊಡಿಸಿ?).
ಆಕಾರ ನಿರಾಕಾರವ ಲಿಂಗಸ್ಥಾಪ್ಯದಲ್ಲಿ ತೋರಿ,
ಬೇಕೆಂದು ಬಂದು ಶಿವನ ಸನ್ನಿಧಕ್ಕೆ ನಿಂದು,
ತಾಂಕು ಸೊಂಕು ತಮ್ಮವೆಂದು ನುಡಿದು,
ನಡೆಕಡೆಗೆ ಹಾಯಲು
ಬೇಕೆಂದು ನೀವು ತಂದರೆ ಬಂತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.